Wikipedia
ಶ್ರೀ ನೀಲಕಂಠ ಕಾಳೇಶ್ವರ
''' Kalgi ''' is a village in the southern state of Karnataka, India. It is located in the Chitapur taluk of Gulbarga district in Karnataka.
ಕಾಳಗಿ: ಚಿತ್ತಾಪುರ ತಾಲೂಕಾ ಕೇಂದ್ರದಿಂದ 35ಕಿ.ಮೀ ಗುಲ್ಬರ್ಗಾದಿಂದ ಪೂರ್ವಕ್ಕೆ 55 ಕಿ.ಮೀ ದೂರದಲ್ಲಿರುವ, ಪ್ರಾಚೀನ ಶಾಸನಗಳಲ್ಲಿ ಕಾಳುಗೆ ಎಂದೇ ಉಲ್ಲೇಖಿತಗೊಂಡಿರುವ ಕಾಳಗಿ ಕ್ಷೇತ್ರವು ಕಲೆ, ಸಾಹಿತ್ಯ ಶಿಲ್ಪಕಲೆ, ಶಾಸನಗಳಿಂದ ಐತಿಹಾಸಿಕ ಭವ್ಯ ಸಾಂಸ್ಕøತಿಯನ್ನು ಹೊಂದಿರುವ ನಾಡು ಇಂತಹ ಉಜ್ವಲ ಇತಿಹಾಸ ಉಳಿಸಿಕೊಂಡಿದೆ.
ಕಾಳಗಿಯಲ್ಲಿರುವ ದೇವಸ್ಥಾನಗಳು
ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ
ಶ್ರೀ ಬನಶಂಕರಿದೇವಿ ದೇವಸ್ಥಾನ
ಶ್ರೀ ಸೂರ್ಯನಾರಾಯಣ ದೇವಸ್ಥಾನ
ಶ್ರೀ ಭೀಮದೇವಿ ದೇವಸ್ಥಾನ
ಶ್ರೀ ನರಸಿಂಹಸ್ವಾಮಿ ದೇವಸ್ಥಾನ
ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
ಶ್ರೀ ಸಿದ್ದೇಶ್ವರ ದೇವಸ್ಥಾನ
ಶ್ರೀ ಸರಸ್ವತಿ ದೇವಸ್ಥಾನ
ಶ್ರೀ ಹುನಮಾನ ದೇವಸ್ಥಾನ
ಶ್ರೀ ಬಸವೇಶ್ವರ ದೇವಸ್ಥಾನ
ಶ್ರೀ ವೇಂಕಟೇಶ್ವರ ದೇವಸ್ಥಾನ
ರಾಜ್ಯದ ಇತರಕಡೆ ಅಭಿವೃದ್ದಿಯಾದ ಐತಿಹಾಸಿಕ ಸ್ಥಳದಂತೆ ಕಾಳಗಿ ಕ್ಷೇತ್ರವೂ ಸಹ ಅಭಿವೃದ್ದಿ ಆಗಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ, ತಾಲೂಕಿನ ಕಾಳಗಿ ಗ್ರಾಮವು ಪ್ರಾಚೀನ ಶಾಸನಗಳಲ್ಲಿ ಕಾಳುಗೆ ಎಂದೇ ಉಲ್ಲೇಖಿತಗೊಂಡಿರುವ ಇದು ಹಿಂದೆ ಮನ್ನೆದಡಿ-1000ದ ರಾಜಧಾನಿ ಪಟ್ಟಣವಾಗಿದ್ದು, ಇಲ್ಲಿಂದ ಈವರೆಗೆ 11 ಶಾಸನಗಳು ವರದಿಯಾಗಿವೆ ಎಂದು ಇತಿಹಾಸದ ಪುಟಗಳಿಂದ ತಿಳಿದುಬರತ್ತಿದೆ.
ಇಲ್ಲಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನದ ಮುಂದೆ ಬಲಭಾಗಕ್ಕೆ ಶಿಥಿಲಾವಸ್ಥೆಯಲ್ಲಿರುವ ಕರಿದೇವರ , ಇದೆ. ಸುಮಾರು 13ನೇ ಶತಮಾನಕ್ಕೆ ಸೇರಿದ ಈ ದೇವಸ್ಥಾನ ಮೂರು ಪ್ರತ್ಯೇಕ ಗರ್ಭಗೃಹ, ತೆರೆದ ಅಂತರಾಳ, ನಡುವೆ ನವರಂಗ ಹಾಗೂ ಅದರಿಂದ ಪೂರ್ವಕ್ಕೆ ಮುಖಮಂಟಪವನ್ನು ಹೊಂದಿದ್ದು ಈ ಭವ್ಯ ತ್ರಿಕೂಟ ದೇವಾಲಯವು ಎತ್ತರವಾದ ಜಗತಿ ಹಾಗೂ ಅಲಂಕೃತ ಅಶಿಷ್ಠಾನದ ಮೇಲೆ ಉತ್ತರಾಭಿಮುಖವಾಗಿ ನಿಂತಿದೆ.
ಆದರೆ ಇಂದು ಈ ದೇವಾಲಯದ ಗರ್ಭಗೃಹ ಹಾಗೂ ಅಂತರಾಳ ಭಾಗಗಳಷ್ಟೆ ಉಳಿದಿದ್ದು ತೆರೆದ ನವರಂಗ ಹಾಗೂ ಮುಖಮಂಟಪ ಭಾಗಗಳು ಪೂರ್ಣ ನಾಶವಾಗಿದೆ. ಇಲ್ಲಿಯ ಗರ್ಭಗೃಹದ ಬಾಗಿಲವಾಡಗಳು ಸಪ್ತಶಾಖಾಲಂಕೃತವಾಗಿದ್ದು ಚಿತ್ತಾಕರ್ಷಕವಾಗಿವೆ. ಪ್ರಧಾನ ಗರ್ಭಗೃಹ ಹಾಗೂ ಪೂರ್ವದ ಗರ್ಭಗೃಹಗಳಲ್ಲಿ ಬಲಹರಿ ಹಾಗೂ ಎಡಹರಿ ಶಿವಲಿಂಗಗಳಿದ್ದು, ಇನ್ನೊಂದು ಬಹಳ ಶಿಥಿಲವಾಗಿದ್ದು, ಏನೂ ಉಳಿದಿಲ್ಲ ಈ ದೇವಾಲಯದ ಹೊಬಿತ್ತಿಯು ವಿಷ್ಣು, ಬ್ರಹ್ಮ, ಈಶ್ವರ, ಭೈರವ, ನಟರಾಜ, ಉಮಾ-ಮಹೇಶ್ವರ, ಮಹಿಷಮರ್ದಿನಿ, ಗಣಪತಿ, ವಿವಿಧ ಭಂಗಿಯಲ್ಲಿ ನಿಂತ ಶಿಲಾಬಾಲಿಕೆಯರ ಸುಂದರ ಶಿಲ್ಪ ಹಾಗೂ ವೈವಿಧ್ಯಮಯವಾದ ಕಿರುಶಿಖರಗಳಿಂದ ಆಲಂಕೃತಗೊಂಡಿದ್ದು ಆಕರ್ಷಕವಾಗಿದೆ.
ಈ ಗುಡಿಯ ಬದಿಯಲ್ಲೇ ಇರುವ ಕಾಳೇಶ್ವರ ದೇವಾಲಯವು ಶಾಸನೋಕ್ತ ಸ್ವಯಂಭು ಕಾಳೇಶ್ವರ ದೇಗುಲವಾಗಿದ್ದು, ಇದರ ಮೊದಲ ಉಲ್ಲೇಖ 1103ರ ಶಾಸನದಲ್ಲಿ ಲಭಿಸುತ್ತದೆ. ಇದೊಂದು ದೇಗುಲ ಸಂಕೀರ್ಣವಾಗಿದ್ದು ಇಲ್ಲಿ ಪೂರ್ವಾಭಿಮುಖವಾಗಿರುವ ನೀಲಕಂಠ ಕಾಳೇಶ್ವರ ರೇವಣಸಿದ್ದೇಶ್ವರ ಹಾಗೂ ಈಶ್ವರ ಗುಡಿ, ಉತ್ತರಾಭಿಮುಖವಾಗಿರುವ ಸೋಮೇಶ್ವರ ಹಾಗೂ ವೀರಭದ್ರ ದೇವಾಲಯಗಳಿದ್ದು ಇವುಗಳಿಗೆಲ್ಲ ಸೇರಿದಂತೆ ವಿಶಾಲವಾದ ತೆರೆದ ಸಭಾಮಂಟಪವಿದೆ.
ದೇವಸ್ಥಾನದ ಬದಿಯಲ್ಲೇ ಪುಷ್ಕರಣಿ ಇದ್ದು, ಆನತಿ ದೂರದಲ್ಲೇ ಹಳ್ಳವಿದೆ. ಈ ಗುಡಿಯ ಆವರಣದಲ್ಲಿ ಚತುರ್ಮುಖ ಗಣಪತಿ ಶಿಲ್ಪ. ಕಾರ್ತಿಕೇಯ, ಕಿರಣಸ್ತಂಭ ಹಾಗೂ ವೀರಗಲ್ಲುಗಳಿದ್ದು, ಸೋಮೇಶ್ವರ ದೇಗುಲದಲ್ಲಿ ಬಲಹರಿ ಲಿಂಗವಿದೆ. ಇದೆ ಗುಡಿಯ ಅಂತರಾಳದ ಛಾವಣಿಯಲ್ಲಿ ಕಲ್ಯಾಣದ ಚಾಳುಕ್ಯರ ಕಾಲದ ಶಾಸನ ಕಲ್ಲಿನ ಶಿರೋಭಾಗದಲ್ಲಿ ಆನೆಯ ಸುಂದರ ಶಿಲ್ಪಕೆತ್ತನೆಯಿದೆ.
ಇಲ್ಲಿಯ ಸಭಾಮಂಟಪವು ವಿಶಾಲವಾಗಿದ್ದು ಅಂಚಿನುದ್ದಕ್ಕೂ ಕಕ್ಷಾಸನವನ್ನು ಹೊಂದಿದ್ದು, ಛತ್ತುಗಳು ಆಕರ್ಷಕವಾಗಿವೆ. ಈ ದೇವಾಲಯದ ಬದಿಯಲ್ಲೇ ಕಾಶಿ ವಿಶ್ವನಾಥ ದೇವಾಲಯ, ರಾಮಲಿಂಗ ಹಾಗೂ ನಂದಿ ಗುಡಿಗಳಿದ್ದು, ರಾಮಲಿಂಗನಗುಡಿ ಬಳಿ ಸುಂದರವಾದ ಸೂರ್ಯ ಶಿಲ್ಪವಿದೆ, ಕಾಳಗಿ ಹಳ್ಳದಿಂದ ಉತ್ತರಕ್ಕೆ ಪುಷ್ಕರಣಿಯ ಬಳಿ ಈಶ್ವರ ಗುಡಿ ಇದ್ದು, ನರಸಿಂಹ ಈಶ್ವರರಿರುವ ಇನ್ನೊಂದು ದೇಗುಲ ಪುಷ್ಕರಣಿಗೆ ಸೇರಿದಂತಿದ್ದು ನಕ್ಷತ್ರಾಕಾರದ ತಳವಿನ್ಯಾಸವನ್ನು ಹೊಂದಿದ್ದು ಸುಂದರವಾಗಿದೆ.
ಈ ಪ್ರದೇಶದಲ್ಲಿ ನಿಸರ್ಗ ಸಂಪತ್ತು ಅಪೂರ್ವವಾಗಿದ್ದು ಅಲ್ಲದೆ ಅವರ್ಣನೀಯವಾಗಿತ್ತು, ಈ ಪ್ರದೇಶದ ಫಲತ್ತಾದ ಭೂಮಿಯಯ ಸದಾಕಾಲ ಹಸಿರಿನಿಂದ ಕಂಗೊಳಿಸುತ್ತಿದೆ, ಈ ಪ್ರದೇಶದಲ್ಲಿ ಒಂದು ನದಿ ಹರಿದು ಹೋಗಲಿದೆ ಇದನ್ನು ರೌದ್ರಾವತಿ ನದಿ ಎಂದು ಹೇಳಲಾಗಿದೆ. ಎಂತಹ ಕಾಲದಲ್ಲಿಯೂ ಇಲ್ಲಿ ನೀರಿಗೆ ಬರಗಾಲವಿಲ್ಲ, ಸರ್ವಕಾಲದಲ್ಲಿಯೂ ಇಲ್ಲಿ ನೀರು ನೆಲೆಗೊಂಡಿರುತ್ತದೆ ಹೀಗಿರುವಾಗ ಇಲ್ಲಿನ ಸುತ್ತಮುತ್ತಲಿನ ರೈತರ ಹೊಲಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗಲಿದೆ ಮತ್ತು ಒಂದು ಉದ್ಯಾನವನ ನಿರ್ಮಾಣ ಆದರೆ ಉತ್ತಮ ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ಭಕ್ತಾಧಿಗಳಿಂದ ಕೇಳಿಬಂದವು.
ಕಾಳಗಿ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಿ, ಇಲ್ಲಿನ ಎಲ್ಲಾ ಐತಿಹಾಸಿಕ ದೇವಸ್ಥಾನಗಳಿಗೆ ಸೂಕ್ತ ರಕ್ಷಣೆ ನೀಡಿ ಹಾಳಾಗದಂತೆ ವ್ಯವಸ್ಥೆ ಮಾಡಬೇಕು ಮತ್ತು ಉತ್ತಮ ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಪ್ರವಾಸಿಕರಿಗೆ ಅನುಕೂಲ ಮಾಡಿಕೊಡಲು ಯಾತ್ರಿಕ ನಿವಾಸ, ಸ್ನಾನದ ಗೃಹಗಳು ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ್ದವರು ಇತ್ತಕಡೆಗೆ ಗಮನ ಹರಿಸುವರೋ ಎಂಬದನ್ನು ಕಾದು ನೊಡಬೇಕು.
ಹೇಳಿಕೆಗಳು :
1) ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಸೂಕ್ತ ರಕ್ಷಣೆಯಿಲ್ಲದೆ ನಶಿಸಿ ಹೊಗುತ್ತಿರುವುದು ದುರಂತ ಸ್ಮಾರಕಗಳ ರಕ್ಷಣೆಗೆ ಪ್ರಾಚ್ಚ್ಯವಸ್ತು ಇಲಾಖೆ ಯಾಗಲಿ ಜನಪ್ರತಿನಿಧಿಗಳಾಗಲಿ ಮುಂದಾಗದಿರುವುದು ಖಂಡನೀಯ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಸ್ಮಾರಕಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಇತಿಹಾಸ ಸಂಪೂರ್ಣವಾಗಿ ನಶಿಸಿ ಹೊಗುತ್ತದೆ.
ಕಲೆ ಮತ್ತು ಸಂಸ್ಕೃತಿ
ಉತ್ತರ ಕರ್ನಾಟಕದ ಊಟ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ
ಭಾಷೆ
ಗ್ರಾಮದ ಪ್ರಮುಖ ಭಾಷೆ ಕನ್ನಡ.
ನೀರಾವರಿ
ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ತೊಗರೆ , ಜೋಳ, ಉಳ್ಳಾಗಡ್ಡಿ , ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ
ಕೃಷಿ ಮತ್ತು ತೋಟಗಾರಿಕೆ
ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆ
ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಕನ್ನಡ ಹಾಗೂ ಇಂಗ್ಲೀಷ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ
ಬೆಳೆ
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಪ್ರಾಣಿ
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬ
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಸರಕಾರಿ ಕಲಾ , ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜ ಹೊಂದಿದ್ದು ಜೊತೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜ ಹಾಗೂ ಸರಕಾರಿ ತಾಂತ್ರಿಕ
ರಾಜಕೀಯ
ಕಾಳಗಿ ಗ್ರಾಮಸಭ ಕ್ಷತ್ರದೊಂದಿಗೆ ಚಿಂಚೋಳಿ ವಿಧಾನಸಭ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ ಬೀದರ ಲೋಕಸಭಾ ಕ್ಷೇತ್ರ ವ್ಯಾಪತ್ತಿಯಲ್ಲಿ ಬರುತ್ತದೆ.